ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್. ಅಸೈನ್ಮೆಂಟ್ 10

ಕೋವಿಡ್ 19 ಇದು ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ.ಇದು ಪ್ರಪಂಚದ ಪ್ರತಿಯೊಂದು ರಾಷ್ಟ್ರದ ಆರ್ಥಿಕ ,ಶೈಕ್ಷಣಿಕ ಸ್ಥಿತಿಗತಿಯ ದಿಕ್ಕನ್ನೇ ಬದಲಾಯಿಸಿತು.ಇದು ಅತ್ಯಂತ ಬಲಿಷ್ಠ ರಾಷ್ಟ್ರಗಳಿಂದ ಹಿಡಿದು ಸಣ್ಣಪುಟ್ಟ ರಾಷ್ಟ್ರಗಳನ್ನು ಬಿಡದೆ ಕಾಡಿದ ಮಹಾಮಾರಿ ವೈರಸ್.
ಕೊರೋನಾ ಒಂದು ಚಿಕ್ಕ ವೈರಸ್ ಆಗಿದ್ದರು ಸಹ ಅದು ಜನರಿಗೆ ಕಲಿಸಿದ ಪಾಠ ಅತಿ ದೊಡ್ಡದು ಮತ್ತು ಎಂದಿಗೂ ಮರೆಯಲಾಗದಂತದ್ದು. ಕೋವಿಡ್ 19ರ ಸಂದರ್ಭ ಎಲ್ಲರಿಗೂ ತಮ್ಮನ್ನು ತಾವೇ ತಿದ್ದಿಕೊಳ್ಳಲು ಒಂದು ಅವಕಾಶ ಒದಗಿಸಿತು ಎಂದು ಹೇಳಿದರು ತಪ್ಪಾಗಲಾರದು ಈ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗಳ ಜೊತೆಗೆ ಶೈಕ್ಷಣಿಕ ರಂಗಕ್ಕೆ ಲಾಕ್ಡೌನ್ ಬರ ಬಡಿಯಿತು. ಶಾಲಾ-ಕಾಲೇಜುಗಳು ಪ್ರಾರಂಭವಾಗಿದೆ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಹೊಡೆತಬಿತ್ತು.
ದಿನೇದಿನೇ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದ ಶೈಕ್ಷಣಿಕ ಚಟುವಟಿಕೆಗಳು ಇನ್ನು ಮುಂದೂಡುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ದೊಡ್ಡ ಸಮಸ್ಯೆ ಎದುರಿಸಬೇಕಾಗಿದೆ ಆದ್ದರಿಂದ ಮಕ್ಕಳಿಗೆ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಪಾಲಕರು ಶಿಕ್ಷಕರು ಮಾರ್ಗದರ್ಶಿ ಸುವುದು ಅತ್ಯವಶ್ಯಕವಾಗಿದೆ.
೧.ಮಕ್ಕಳಿಗೆ ಕೋವಿಡ್ 19 ರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿಕೊಡಬೇಕು
೨. ಎಸ್ಎಂಎಸ್ ಅನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸುವುದು
೩. ತಮ್ಮ ತರಗತಿ ಅನುಸಾರವಾಗಿ ಪಠ್ಯಪುಸ್ತಕಗಳನ್ನು ಫೋನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು.
೪. ಯೂಟ್ಯೂಬಲ್ಲಿ ಬರುವ ಪಾಠಗಳನ್ನು ವೀಕ್ಷಿಸುವುದು, ನೋಟ್ಸ್ ಮಾಡಿಕೊಳ್ಳಲು ತಿಳಿಸುವುದು.
೫. ಶಿಕ್ಷಕರು ಪ್ರತಿದಿನ ಮಕ್ಕಳೊಂದಿಗೆ ಫೋನ್ನಲ್ಲಿ ಮಾತಾಡಿ ಅವರಿಗೆ ಹೋಂವರ್ಕ್ ಕೊಡುವುದು. ಮಕ್ಕಳಿಗೆ ಬರುವ ಸಮಸ್ಯೆಗಳನ್ನು ಪರಿಹರಿಸುವುದು
೬. ದೂರದರ್ಶನದಲ್ಲಿ ಪ್ರಸಾರವಾಗುವ ವಿಷಯವಾರು ತರಗತಿಗಳನ್ನು  ವೀಕ್ಷಿಸಲು ತಿಳಿಸುವುದು.
೭. ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸುವಂತೆ ಪ್ರೋತ್ಸಾಹಿಸುವುದು

Comments

Popular posts from this blog

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ ವರ್ಕ್ ಫ್ರಮ್ ಹೋಮ್ 2020. ಬೋಧಿಸುವ ವಿಷಯ: ನಲಿಕಲಿ. ಅಸೈನ್ಮೆಂಟ್ 2. ತರಗತಿವಾರು ಮೈಲುಗಲ್ಲುಗಳನ್ನು ಒಳಗೊಂಡಿರುವ ಕಲಿಕಾಂಶ ವನ್ನು ಆದರಿಸಿ ಕಲಿಕಾಂಶ ವನ್ನು ಕಲಿಸಲು ನಿಗದಿಗೊಳಿಸಿರುವ ಚಟುವಟಿಕೆಯ ಜೊತೆಯಲ್ಲಿ ಅಳವಡಿಸಿಕೊಳ್ಳಬಹುದಾದ ಪೂರಕ ಚಟುವಟಿಕೆಗಳು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 4. ಕಲಿಕೋಪಕರಣಗಳ ಸಿದ್ಧತೆ. ಶಿಕ್ಷಕರ ಹೆಸರು: ವೆಂಕಟಮ್ಮ. ಬೋಧಿಸುವ ವಿಷಯ: ನಲಿಕಲಿ