ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್ -2020. ಬೋಧಿಸುವ ವಿಷಯ: ನಲಿಕಲಿ. ಅಸೈನ್ಮೆಂಟ್: 5 ಯೂಟ್ಯೂಬ್ನಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ವಿಡಿಯೋ ನೋಡಿ ಜ್ಞಾನ ಹೆಚ್ಚಿಸಿ ಕೊಳ್ಳುವುದು ಹಾಗೂ ಶಾರ್ಟ್ ನೋಟ್ಸ್ ಮಾಡಿಕೊಳ್ಳುವುದು
ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 5 ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ವೀಡಿಯೋಗಳನ್ನು ಯೂಟ್ಯೂಬ್ನಲ್ಲಿ ವೀಕ್ಷಿಸಿದ ವೀಡಿಯೊಗಳು ಮಾಹಿತಿ
1. Educare media Plus. Demo class
ಶ್ರೀಮತಿ ಆಶಾ ಹೆಗಡೆ. ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಳಕುಂದ ತಾಲೂಕು ಜಿಲ್ಲೆ ಕಲಬುರಗಿ.
ಈ ವಿಡಿಯೋದಲ್ಲಿ ಆಶಾ ಮೇಡಂ ರವರು ತರಗತಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಣ್ಣಿಗೆ ಕಾಣುವಂತೆ ತೋರಿಸಿದ್ದಾರೆ ಪ್ರತಿಯೊಂದು ಮಗುವಿಗೂ ಪ್ರತ್ಯೇಕವಾಗಿ ಗಮನಹರಿಸಬೇಕು ತರಗತಿಯ ಪ್ರಾರಂಭದಲ್ಲಿ ಹವಾಮಾನ ನಕ್ಷೆ ಮಕ್ಕಳಿಂದ ಗುರುತಿಸುವುದರ ಮೂಲಕ ಹಿಡಿದು ಇಡೀ ತರಗತಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನುು ಉತ್ತಮವಾಗಿ ತೋರಿಸಿಕೊಟ್ಟಿದ್ದಾರೆ.
2. ನಲಿಕಲಿ ಟಿಎಲ್ಎಮ್ ಗ್ರೂಪ್.
ಇಲ್ಲಿ ನಲಿ ಕಲಿ ಗೆ ಸಂಬಂಧಿಸಿದಂತೆ 10 ರೀತಿಯ ನಲಿಕಲಿ ಚಪ್ಪಾಳೆ ತೋರಿಸಿಕೊಟ್ಟಿದ್ದಾರೆ.
1. ನಲಿ ಕಲಿ ಚಪ್ಪಾಳೆ.
2. Welcome clubs.
3. ನಮಸ್ಕಾರ ಚಪ್ಪಾಳೆ.
4. ಡುಂಡುಂ ಚಪ್ಪಾಳೆ.
5. ಪಿಪಿ ಚಪ್ಪಾಳೆ
6. ಶಬಾಷ್ ಚಪ್ಪಾಳೆ
7. ಟ್ರಿನ್ ಟ್ರಿನ್ ಚಪ್ಪಾಳೆ
8. ರೈಲು ಚಪ್ಪಾಳೆ
9. ಮಳೆ ಚಪ್ಪಾಳೆ
10. ಗಿಲಿಗಿಲಿ ಚಪ್ಪಾಳೆ
ಈ ಎಲ್ಲಾ ಚಪ್ಪಾಳೆಗಳನ್ನು ಮಕ್ಕಳಿಂದ ಮಾಡಿಸುವುದರ ವಿಡಿಯೋ ತುಂಬಾ ಚೆನ್ನಾಗಿತ್ತು. ನಮ್ಮ ಶಾಲೆಯಲ್ಲಿಯೂ ಈ ರೀತಿಯಾದ ಚಪ್ಪಾಳೆಗಳನ್ನು ಮಕ್ಕಳಿಗೆ ಕಲಿಸಲು ಅನುಕೂಲವಾಗುತ್ತದೆ.
3. ನಲಿಕಲಿ ಆಟಗಳು: ಡೆಸ್ಟರ್ ಆಟ
ಮಹಾಂತೇಶ್ ಹುಲ್ಲೂರು ರವರ ವಿಡಿಯೋ
ಈ ವಿಡಿಯೋದಲ್ಲಿ ಮಕ್ಕಳಿಗೆ ಡಸ್ಟರ್ ಆಟವನ್ನು ಹೇಗೆ ಆಡಿಸಬೇಕು ಎಂಬುದನ್ನು ಮಕ್ಕಳಿಂದ ಪ್ರತ್ಯಕ್ಷವಾಗಿ ಆಡಿಸಿ ತೋರಿಸಿಕೊಟ್ಟಿದ್ದಾರೆ. ನಾವು ನಮ್ಮ ಶಾಲೆಯಲ್ಲಿ ಇದೇ ರೀತಿಯಾದ ಅನೇಕ ಆಟಗಳನ್ನು ಆಡಿಸಲು ಅನುಕೂಲವಾಗುತ್ತದೆ ಅನುಕೂಲವಾಗುತ್ತದೆ.
4. Nali Kali active teachers group.
ಮೋಹನ್ ಗೌಡ ರವರ ಸರಳ ಪ್ರಯೋಗದ ವಿಡಿಯೋ.
ಇಲ್ಲಿ ನಲಿಕಲಿಯ ವಿದ್ಯಾರ್ಥಿಯಿಂದ ಒಂದು ಸರಳ ಪ್ರಯೋಗವನ್ನು ಮಾಡಿಸಿದ್ದಾರೆ. ಪ್ರಯೋಗದ ಹೆಸರು ಅದಲು ಬದಲು ಇಲ್ಲಿ ವಿದ್ಯಾರ್ಥಿಯು ಪ್ರಯೋಗವನ್ನು ಹೇಗೆ ಮಾಡಬೇಕೆಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾಳೆ. ಪ್ರಯೋಗ ಉತ್ತಮವಾಗಿ ಮೂಡಿಬಂದಿದೆ ನಾವು ನಮ್ಮ ಮಕ್ಕಳಿಂದ ಮಾಡಿಸಲು ಉಪಯುಕ್ತ.
5. Nali Kali short movie.
Rahim Raj ghps padmunja.
ಈ ವಿಡಿಯೋದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವ ಬಗ್ಗೆ ತಿಳಿಸಲಾಗಿದೆ. ಈ ವಿಡಿಯೋ ಪ್ರತಿಯೊಂದು ಮಗುವನ್ನು ಶಾಲೆಯಿಂದ ವಂಚಿತರಾಗದಂತೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ
6. Nali Kali puppet show.
Abli Subramanya heggade.
ಈ ವಿಡಿಯೋದಲ್ಲಿ ನಲಿಕಲಿ ಪಪೆಟ್ ಶೋ ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಸಿಂಹ ಮತ್ತು ಇಲಿ ಕಥೆಯೊಂದಿಗೆ ತೋರಿಸಿಕೊಟ್ಟಿದ್ದಾರೆ. ನಲಿಕಲಿ ತರಗತಿಯಲ್ಲಿ ಪಪೆಟ್ ಶೋ ತೋರಿಸಲು ಈ ವಿಡಿಯೋ ಉತ್ತಮವಾದ ಮಾಹಿತಿ ಒದಗಿಸುತ್ತದೆ.
7. ನಲಿಕಲಿ ಹಾಡುಗಳು.
ರಾಜೇಶ್ವರಿ ಬಿಕೆ. Ghps javalaga.
ಇಲ್ಲಿ ನಲಿ ಕಲಿ ಗೆ ಸಂಬಂಧಿಸಿದ ಹಾಡುಗಳು ಪರಿಚಯ ಮಾಡಿಕೊಡಲಾಗಿದೆ. ಮಕ್ಕಳೊಂದಿಗೆ ರೆಲಾ ರೆಲಾ ಎಂಬ ಅಭಿನಯ ಗೀತೆ ಯನ್ನು ಉತ್ತಮವಾಗಿ ಮಾಡಿಸಿದ್ದಾರೆ. ನಮ್ಮ ತರಗತಿಯಲ್ಲಿ ಈ ಹಾಡನ್ನು ಹೇಳಿಕೊಡಲು ಅನುಕೂಲ.
8. Nali Kali craft work.
Shruti MD.
ಈ ವಿಡಿಯೋದಲ್ಲಿ ನಲಿಕಲಿ ಯಲ್ಲಿ ಬರುವ ಕ್ರಾಫ್ಟ್ ವರ್ಕ್ ಗಳನ್ನು ಹೇಗೆ ಮಾಡುವುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಸದಿಂದ ರಸ ಎಂಬಂತೆ ಬಹಳಷ್ಟು ಕಲಿಕೋಪಕರಣ ಗಳನ್ನು ತಯಾರಿಸಿದ್ದಾರೆ. ನಾವು ನಮ್ಮ ಶಾಲೆಯಲ್ಲಿ ಇದೇ ರೀತಿಯಾದ ಅನೇಕ ಕಲಿಕೋಪಕರಣಗಳು ತಯಾರಿಸಿಕೊಳ್ಳಲು ವಿಡಿಯೋ ಸಹಾಯಕವಾಗಿದೆ. ಪೆಪ್ಸಿ ಮುಚ್ಚಳದಿಂದ ತಯಾರಿಸಿದ ಅಕ್ಷರಗಳ ಬರವಣಿಗೆ ಉತ್ತಮವಾಗಿದೆ.
9. ನಲಿಕಲಿ ಟಿಎಲ್ಎಮ್ ಗ್ರೂಪ್.
ಶಿವಕುಮಾರ್ ಸಹಶಿಕ್ಷಕರು
ಈ ವಿಡಿಯೋದಲ್ಲಿ ನಲಿ-ಕಲಿ ಪದಗಳ ಆಟವನ್ನು ಆಡಿಸಿ ತೋರಿಸಿದ್ದಾರೆ. ಮಕ್ಕಳು ಉತ್ತಮವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಪದಗಳ ಆಟ ಉತ್ತಮವಾಗಿದೆ ನಮ್ಮ ತರಗತಿಯಲ್ಲಿ ಈ ಆಟವನ್ನು ಆಡಿಸಬಹುದು.
Comments
Post a Comment