ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 6 ಬೋಧಿಸುವ ವಿಷಯ : ನಲಿಕಲಿ
1) ಕವಿತಾ ಸಹಶಿಕ್ಷಕಿ ಚರ್ಚಿಸಿದ ವಿಷಯ: ಮಕ್ಕಳ ಭಾಷೆ ಸಮಸ್ಯೆ. ನಲಿಕಲಿ ತರಗತಿಯ ಮಕ್ಕಳಲ್ಲಿ ಭಾಷೆ ಸಮಸ್ಯೆ ಇರುವುದರಿಂದ ಮೊದಲಿಗೆ ಕೆಲವೊಂದಿಷ್ಟು ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳಿಗೆ ಅವರ ಮಾತೃಭಾಷೆ ಬಳಸಿ ಹೇಳುವುದರ ಜೊತೆಗೆ ಕನ್ನಡ ಭಾಷೆಯಲ್ಲಿ ಹೇಳುವುದರಿಂದ ತಿಳಿದುಕೊಳ್ಳುತ್ತಾರೆ ಮನೆಯಲ್ಲಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಜೊತೆಗೆ ಕನ್ನಡ ಭಾಷೆಯಲ್ಲಿ ಮಾತನಾಡಲು ತಿಳಿಸುವುದು ಈ ವಿಷಯವಾಗಿ ನನ್ನ ಸಹೋದ್ಯೋಗಿ ಆದ ಕವಿತಾ ಸಹಶಿಕ್ಷಕಿ ಅವರೊಂದಿಗೆ ಚರ್ಚಿಸಿದಾಗ ಅವರು ಕೆಲವೊಂದು ಸಲಹೆಗಳನ್ನು ತಿಳಿಸಿದರು ಮಕ್ಕಳಿಗೆ ಕನ್ನಡ ಟಿವಿ ಚಾನಲ್ ನೋಡುವಂತೆ ಹಾಗೂ ಮನೆಯಲ್ಲಿಯೂ ಕೂಡ ಕನ್ನಡ ಭಾಷೆಯನ್ನು ಬಳಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು ಜೊತೆಗೆ ಪಾಲಕರಿಗೂ ಸಹ ಕನ್ನಡ ಭಾಷೆಯನ್ನು ಹೆಚ್ಚೆಚ್ಚಾಗಿ ಬಳಸಲು ಹೇಳಬೇಕು ಎಂಬ ಸಲಹೆಯನ್ನು ನೀಡಿದರು.
೨) ವೆಂಕಟಮ್ಮ ಸಹಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಜನೂರು
ಚರ್ಚಿಸಿದ ವಿಷಯ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರಗಳು
ಹಳ್ಳಿಗಳಲ್ಲಿ ಮಕ್ಕಳು ವ್ಯವಸಾಯದ ಕೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ಶಾಲೆಯನ್ನು ತಪ್ಪಿ ಸುತ್ತಿರುತ್ತಾರೆ ಇದರಿಂದ ಮಕ್ಕಳ ಕಲಿಕೆ ಕುಂಠಿತಗೊಳ್ಳುತ್ತದೆ ಜೊತೆಗೆ ಕಲಿಕೆಯಲ್ಲಿ ನಿರಾಸಕ್ತಿಯನ್ನು ಹೊಂದುತ್ತಾರೆ ಇಂತಹ ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ನನ್ನ ಸಹೋದ್ಯೋಗಿ ಯಾದ ವೆಂಕಟಮ್ಮ ಸಹಶಿಕ್ಷಕಿ ಇವರೊಂದಿಗೆ ಚರ್ಚಿಸಿದಾಗ ಅವರು ಮಕ್ಕಳ ಸಮಸ್ಯೆಗಳನ್ನ ಅರಿತು ಅವುಗಳನ್ನು ಪರಿಹರಿಸಬೇಕು ಜೊತೆಗೆ ಮಕ್ಕಳಿಗೆ ವ್ಯವಸಾಯದ ಚಟುವಟಿಕೆಗಳು ಇದ್ದಾಗ ಹೊಲಗಳಿಗೆ ಹೋಗಿ ಮರುದಿನ ಶಾಲೆಗೆ ಬರಲು ತಿಳಿಸಬೇಕು ನಿನ್ನೆಯ ತರಗತಿಯಲ್ಲಿ ಆಗಿರುವ ಪಾಠಗಳು ಮನೆ ಕೆಲಸ ಎಲ್ಲವನ್ನು ಇತರ ವಿದ್ಯಾರ್ಥಿಗಳಿಂದ ತಿಳಿದು ಮಾಡಿಕೊಂಡು ಬರಲು ಹೇಳುವುದು
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಒತ್ತನ್ನು ಕೊಟ್ಟು ಅವರಿಗೆ ಹಿರಿಯ ವಿದ್ಯಾರ್ಥಿಗಳ ಸಹಾಯವನ್ನು ಪಡೆಯಲು ತಿಳಿಸುವುದು ಮಾರ್ಗದರ್ಶಿ ಸುವುದು ಮಕ್ಕಳಿಗೆ ಕಲಿಕೋಪಕರಣ ಗಳನ್ನು ಬಳಸಿಕೊಂಡು ಸುಲಭವಾಗಿ ಅರ್ಥೈಸಿ ಹೇಳುವುದು ಇದರಿಂದ ಅವರ ಪ್ರಗತಿಯನ್ನು ಕಾಣುತ್ತೇವೆ
೩) ರಾಜೇಶ್ವರಿ ಸಹಶಿಕ್ಷಕ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ
ಚರ್ಚಿಸಿದ ವಿಷಯ: ಕಲಿಕೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಆಗುವ ಅನುಕೂಲಗಳು
ಈ ಮೇಲಿನ ವಿಷಯವಾಗಿ ನನ್ನ ಸಹೋದ್ಯೋಗಿ ಯಾದ ರಾಜೇಶ್ವರಿ ಸಹಶಿಕ್ಷಕಿ ಅವರೊಂದಿಗೆ ಚರ್ಚಿಸಿದಾಗ ಕಲಿಕೆಯು ಉತ್ತಮವಾಗಿ ಸಾಗಬೇಕಾದರೆ ಕಲಿಕೋಪಕರಣಗಳು ಅತಿ ಮುಖ್ಯ ಕ ಕಲಿಕೋಪಕರಣಗಳ ಆದ ಚಿತ್ರಪಟ ಆಡಿಯೋ ರೇಡಿಯೋ ರೇಡಿಯೋ ಗಣಿತ ಕಿಟ್ ಫ್ಲಾಷ್ ಕಾರ್ಡ್ ಡಯಾಸ್ ಮುಂತಾದವುಗಳನ್ನು ಬಳಸಿಕೊಳ್ಳಬೇಕು ಒಂದು ಚಿತ್ರ ಪಟ್ಟವು 100 ಶಬ್ದಗಳಿಗೆ ಸಮ ನಂಬುದುಕಲಿಕೆಯಲ್ಲಿ ಕಲಿಕೋಪಕರಣಗಳ ಮಹತ್ವ ತಿಳಿಸುತ್ತದೆ ಆದ್ದರಿಂದ ಕಲಿಕೆಯಲ್ಲಿ ಅದರಲ್ಲೂ ನಲಿ-ಕಲಿ ಮಕ್ಕಳಿಗೆ ಕಲಿಕೋಪಕರಣ ಗಳನ್ನು ಹೆಚ್ಚೆಚ್ಚಾಗಿ ಬಳಸಬೇಕಾಗುತ್ತದೆ ಆದ್ದರಿಂದ ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮಕ್ಕಳಿಗೆ ಬೋಧಿಸುವುದರಿಂದ ಅವರ ಕಲಿಕೆಯು ಯಶಸ್ವಿಯಾಗಿ ಸಾಗುತ್ತದೆ ಆದ್ದರಿಂದ ನಾವು ಕೂಡ ತಂತ್ರಜ್ಞಾನವನ್ನು ಬಳಸುವ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ ಎಂಬುದನ್ನು ಕುರಿತು ಚರ್ಚಿಸಲಾಯಿತು
೪ ಪಾರ್ವತಿ ಸಹಶಿಕ್ಷಕಿ
ವರ್ಕ್ ಫ್ರಂ ಹೋಮ್ ಅಡಿಯಲ್ಲಿ ಕೊಟ್ಟ ಅಸೈನ್ ಮೆಂಟ್ ಗಳಲ್ಲಿ ಕಲಿಕಾಂಶಗಳ ಬಗ್ಗೆ ಹೇಗೆ ಬರೆಯಬೇಕುಎಂಬುದನ್ನು ಪಾರ್ವತಿ ಸಹಶಿಕ್ಷಕಿ ಅವರೊಂದಿಗೆ ಚರ್ಚಿಸಲಾಯಿತು ಕಲಿಕಾಂಶಗಳು ಮತ್ತು ಅವುಗಳಿಗೆ ಪೂರಕವಾಗಿ ಕೈಗೊಳ್ಳುವ ಚಟುವಟಿಕೆಗಳನ್ನು ಹೇಗೆ ಬರೆಯಬೇಕು ಎಂಬದನ್ನು ಎಂಬುದನ್ನು ಕುರಿತು ಮೇಡಂ ಅವರು ಹೇಳಿದರು. ಅಲ್ಲಿ ಎದುರಾಗುವ ಕೆಲವೊಂದಿಷ್ಟು ಸಮಸ್ಯೆಗಳಿಗೆ ಪರಿಹಾರಗಳು ಕೊಟ್ಟರು.
Comments
Post a Comment