ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 9. ಶಿಕ್ಷಕರ ಹೆಸರು: ವೆಂಕಟಮ್ಮ. ಬೋಧಿಸುವ ವಿಷಯ: ನಲಿಕಲಿ. ಮನೆಯಿಂದಲೇ ಕೆಲಸದ ಡಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡ ಬಗ್ಗೆ

"ಮನೆಯಿಂದಲೇ ಕೆಲಸ"ಇಂದು ಎಲ್ಲಾ ಕ್ಷೇತ್ರಗಳಲ್ಲೂ ಚಾಲ್ತಿಯಲ್ಲಿರುವ ಒಂದು ಅನಿವಾರ್ಯ ನಿಯಮ. ಕೋವಿಡ್ 19 ಇದು ಜಗತ್ತಿಗೆ ಅಂಟಿದ ಒಂದು  ಅಂಟುರೋಗ ಇದರಿಂದ ಬಹಳಷ್ಟು ಸಮಸ್ಯೆಗಳು ಎದುರಿಸಬೇಕಾಗಿದೆ. ಶೈಕ್ಷಣಿಕವಾಗಿ,ಆರ್ಥಿಕವಾಗಿಿ ಸಾಮಾಜಿಕವಾಗಿ,ವೃತ್ತಿಪರವಾಗಿ  ನಷ್ಟ್ಗ್ಟ್ ಅನೇಕ ನಷ್ಟಗಳನ್ನು ಎದುರಿಸುತ್ತಿದ್ದೇವೆ. ಶೈಕ್ಷಣಿಕವಾಗಿ ಶಾಲೆಗಳನ್ನು ಮುಂದೂಡುವ ಪರಸ್ಥಿತಿ ಬಂದಿದೆ. ಇದರ ಪರಿಣಾಮವಾಗಿ ಮನೆಯಿಂದಲೇ ಕೆಲಸ ಎಂಬ ಪರಿಕಲ್ಪನೆ ಶಿಕ್ಷಣ ಇಲಾಖೆಯಿಂದ ಹೊರತಾಗಿಲ್ಲ.
                  ಈ ಸಮಯ ಶಿಕ್ಷಕರಿಗೆ ಸದುಪಯೋಗವಾಗಲಿ ಎಂದು ಶಿಕ್ಷಣ ಇಲಾಖೆಯು ಆನ್ಲೈನ್ ತರಬೇತಿಗಳನ್ನು ಆರಂಭಿಸಿದೆ. ಬದಲಾದ ಪಠ್ಯಕ್ರಮ ಪಠ್ಯವಸ್ತು ಮುಂತಾದವುಗಳ ಬದಲಾವಣೆಗೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯ ಇಂದು ಅತ್ಯಗತ್ಯವಾಗಿದೆ. ಕೋವಿಡ್ 19 ರ ವಿಷಮಸ್ಥಿತಿಯಲ್ಲಿ ಆನ್ಲೈನ್ ತರಬೇತಿಗಳು ನಮಗೆ ಸಿಕ್ಕ ಒಂದು ವರದಾನವೆಂದು ಹೇಳಬಹುದು. ಈ ತರಬೇತಿಗಳಿಂದ ನಮ್ಮ ವೃತ್ತಿ ನೈಪುಣ್ಯತೆ, ಅಭಿಕ್ಷಮತೆ, ಕೌಶಲ್ಯ ಮುಂತಾದವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
       ನಲಿ ಕಲಿ ಗೆ ಸಂಬಂಧಿಸಿದಂತೆ ಒಂದು ವಾರ ಆನ್ಲೈನ್ ತರಬೇತಿಯನ್ನು ನೀಡಲಾಯಿತು ಈ ತರಬೇತಿಯಿಂದ ನಮಗೆ ಆಧುನಿಕ ತಂತ್ರಜ್ಞಾನ ಬಳಕೆಯ ಮೂಲಕ ತರಬೇತಿಯು ಹೊಸ ಅನುಭವವನ್ನು ಒದಗಿಸಿತು. ಹೊಸತನವನ್ನು ನಾವು ಸ್ವೀಕರಿಸುವುದರ ಮೂಲಕ ವಿಷಯ ಅನುಭವವು ಸಿಕ್ಕಿತು. ಕಡಿಮೆ ಸಮಯದಲ್ಲಿ ಬಹಳಷ್ಟು ವಿಷಯವನ್ನು ತಿಳಿಯಲು ಈ ತರಬೇತಿಯು ಮುಖ್ಯವಾದ ಪಾತ್ರ ವಹಿಸಿತು.
   ನಲಿಕಲಿಯ ಇಂಗ್ಲಿಷ್ ತರಬೇತಿ ನೀಡಿದ್ದು ನಮಗೆ ಅತಿ ಉಪಯುಕ್ತವಾಗಿತ್ತು ಏಕೆಂದರೆ ಇಷ್ಟು ದಿನ ನಲಿಕಲಿಯ ಇಂಗ್ಲಿಷ್ ಕಾರ್ಡುಗಳು ಇರಲಿಲ್ಲ ಅವುಗಳ ಪರಿಚಯ ಮೊದಲೇ ಮಾಡಿಸಿರುವುದು ನಮಗೆ ಒಂದಿಷ್ಟು ಮಾಹಿತಿಯನ್ನು ಒದಗಿಸಿತು. ಮುಂದೆ ಕಾರ್ಡುಗಳು ಬಂದಾಗ ಅವುಗಳನ್ನು ಹೇಗೆ ಉಪಯೋಗಿಸಬೇಕು ಎಂಬುದರ ಮಾಹಿತಿ ತಿಳಿಯಿತು. 
      ಕೋವಿಡ್ 19 ಈ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ ನಲ್ಲಿ ಕೆಲವೊಂದಿಷ್ಟು ಚಟುವಟಿಕೆಗಳನ್ನು ನೀಡಲಾಗಿತ್ತು. ಮಕ್ಕಳ ಕೃತಿ ಸಂಪುಟ, ಶಿಕ್ಷಣ ಕುರಿತು ಮಾಹಿತಿ, ಕ್ರಿಯಾ ಸಂಶೋಧನೆ, ಆಧುನಿಕ ಶಿಕ್ಷಣದಲ್ಲಿ ತಂತ್ರಜ್ಞಾನಗಳ ಬಳಕೆ ಇವುಗಳ ಬಗ್ಗೆ ಲೇಖನ ಬರೆಯಲು ತಿಳಿಸಲಾಗಿತ್ತು ಎಲ್ಲ ಕಾರ್ಯಗಳಿಂದ ನಮ್ಮ ವೃತ್ತಿ ನೈಪುಣ್ಯತೆಯ ನಿರಂತರವಾಗಿ ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು. ಜೊತೆಗೆ ಈಗ ಕೊಟ್ಟಿರುವ 10 ಚಟುವಟಿಕೆಗಳು ಸಹ ಮುಖ್ಯವಾದವು. ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಈ ಚಟುವಟಿಕೆಗಳನ್ನು ಕೊಡುವುದರಿಂದ ಅವರು ನಿರಂತರವಾಗಿ ಹೊಸ ಆಲೋಚನೆಗಳೊಂದಿಗೆ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಇದು ಒಂದು ಸುವರ್ಣಾವಕಾಶ ಎಂದು ಹೇಳಲಾಗುತ್ತದೆ.
        ಅಕ್ಕಪಕ್ಕದಲ್ಲಿರುವ ಮಕ್ಕಳಿಗೆ ಕೋವಿಡ್ 19 ರ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಹಾಗೂ ಅವರ ಕಲಿಕೆಗೆ ನೆರವಾಗುವಂತಹ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹಿಸಿ ಮಾರ್ಗದರ್ಶಿ ಸಿರುವುದು. ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಅವರ ಅಭ್ಯಾಸಕ್ಕೆ ಮಾರ್ಗದರ್ಶಿಸಿ ಓದಲು ಸಹಾಯ ಮಾಡಿರುವುದು. ಅವರ ಜೊತೆ ವಿಷಯಗಳನ್ನು ಚರ್ಚಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಿರುವುದರಿಂದಕೆಲವೊಂದು ಅಂಶಗಳ ಬದಲಾವಣೆಗಳು ತಿಳಿದಿವೆ. ಪರೀಕ್ಷೆಯ ಬಗ್ಗೆ ಮಕ್ಕಳಿಗೆ ಪೂರ್ವ ತಯಾರಿಯನ್ನು ಮಾಡಿ ಕೊಡಲು ಈ ಸಂದರ್ಭವು ನನಗೆ ಸಹಾಯಕವಾಗಿತ್ತು.
     


          

Comments

Popular posts from this blog

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ ವರ್ಕ್ ಫ್ರಮ್ ಹೋಮ್ 2020. ಬೋಧಿಸುವ ವಿಷಯ: ನಲಿಕಲಿ. ಅಸೈನ್ಮೆಂಟ್ 2. ತರಗತಿವಾರು ಮೈಲುಗಲ್ಲುಗಳನ್ನು ಒಳಗೊಂಡಿರುವ ಕಲಿಕಾಂಶ ವನ್ನು ಆದರಿಸಿ ಕಲಿಕಾಂಶ ವನ್ನು ಕಲಿಸಲು ನಿಗದಿಗೊಳಿಸಿರುವ ಚಟುವಟಿಕೆಯ ಜೊತೆಯಲ್ಲಿ ಅಳವಡಿಸಿಕೊಳ್ಳಬಹುದಾದ ಪೂರಕ ಚಟುವಟಿಕೆಗಳು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್ ಅಸೈನ್ಮೆಂಟ್ 4. ಕಲಿಕೋಪಕರಣಗಳ ಸಿದ್ಧತೆ. ಶಿಕ್ಷಕರ ಹೆಸರು: ವೆಂಕಟಮ್ಮ. ಬೋಧಿಸುವ ವಿಷಯ: ನಲಿಕಲಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪೆಟ್ಲಾ. ವರ್ಕ್ ಫ್ರಮ್ ಹೋಮ್. ಅಸೈನ್ಮೆಂಟ್ 10